ಜಾರ್ಜ್ ವಿಟೆಟ್ (೧೮೪೭ - ೧೯೨೬, ಆಂಗ್ಲದಲ್ಲಿ: ) ಬಾಂಬೆ ನಗರದಲ್ಲಿ ಕೆಲಸ ಮಾಡಿದ ಸ್ಕಾಟಿಷ್ ವಾಸ್ತುಶಿಲ್ಪಿಯಾಗಿದ್ದರು. ವಿಟೆಟ್ ರವರು ೨೬ನೇ ನವೆಂಬರ್ ೧೮೪೭ರಂದು ಸ್ಕಾಟ್ಲ್ಯಾಂಡ್‍ ದೇಶದ ಬ್ಲೇರ್ ಅಠೋಲ್ ಗ್ರಾಮದಲ್ಲಿ ಜನಿಸಿದರು. ಪರ್ತ್ ನಗರದಲ್ಲಿ ಆಂಡ್ರೂ ಹೈಟನ್ ರವರ ಬಳಿ ವಾಸ್ತುಶಿಲ್ಪವನ್ನು ಕಲಿತರು. ಮೊದಲಾಗಿ ಸ್ಕಾಟ್ಲ್ಯಾಂಡ್‍ನ ಎಡಿನ್ಬರ್ಗ್ ಮತ್ತು ಇಂಗ್ಲೆಂಡ್‍ನ ಯಾರ್ಕ್ ನಗರಗಳಲ್ಲಿ ಕೆಲಸ ಮಾಡಿದರು. ಆನಂತರ ೧೯೦೪ರಲ್ಲಿ ಬಾಂಬೆ (ಈಗಿನ ಮುಂಬೈ) ನಗರದ ಕನ್ಸಲ್ಟಿಂಗ್ ಆರ್ಕಿಟೆಕ್ಟ್ ಆಗಿದ್ದ ಜಾನ್ ಬೆಗ್ ರವರ ಬಳಿ ಕೆಲಸ ಮಾಡಲು ಭಾರತಕ್ಕೆ ಬಂದು ಸೇರಿದರು. ಇವರಿಬ್ಬರೂ ಜೊತೆಸೇರಿ ಬಾಂಬೇಯಿನಲ್ಲಿ ಇಂಡೋ-ಸರೆಸೆನಿಕ್ ಶೈಲಿ ಪದ್ಧತಿಯಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಸುಮಾರು ಕಟ್ಟಡಗಳು ಈಗ ಮುಂಬೈ ನಗರದ ವಿಶೇಷ ಹೆಗ್ಗುರುತುಗಳಾಗಿ ಪರಿಗಣಿಸಲಾಗಿವೆ. ವಿಟೆಟ್ ರವರು ತೀವ್ರವಾದ ಭೇದಿ ರೋಗದಿಂದ ನರಳಿ ಬೊಂಬಾಯಿನಲ್ಲೇ ೧೧ನೇ ಸೆಪ್ಟೆಂಬರ್ ೧೯೨೬ ರಂದು ಮರಣ ಹೊಂದಿದರು. ಅವರ ದೇಹವನ್ನು 'ಸಿವ್ರಿಯ ಸ್ಮಶಾನ'ದಲ್ಲಿ ದಫನು ಮಾಡಲಾಯಿತು. ಇಂಡೊ-ಸಾರ್ಸನಿಕ್ ಪದ್ಧತಿಯ ಕಟ್ಟಡ ನಿರ್ಮಾಣವನ್ನು ಹೆಚ್ಚು ಜನಪ್ರಿಯ ಮಾಡಲು ಜಾನ್ ಬೆಗ್ ಜೊತೆ ಸೇರಿ ಹಲವು ಮಹತ್ವದ ಕಟ್ಟಡಗಳ ನಿರ್ಮಾಣಕ್ಕೆ ನಾಂದಿಯಾದವರು. == ವಿಟೆಟ್ ರವರು ನಿರ್ಮಿಸಿದ ಕೆಲವು ಕಟ್ಟಡಗಳು == ಬಾಂಬೆ ನಗರದಲ್ಲಿ ವಿಟೆಟ್‍ರವರು ಈ ಕೆಳಗಿನ ಕಟ್ಟಡಗಳ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದರು: ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್ ಗೇಟ್ ವೇ ಆಫ್ ಇಂಡಿಯ ದಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ದ ಸ್ಮಾಲ್ ಕಾಸೆಸ್ ಕೋರ್ಟ್ ದ ವಾಡಿಯ ಮೆಟರ್ನಿಟಿ ಹಾಸ್ಪಿಟಲ್ ದ ಕೆ.ಇ.ಎಮ್. ಹಾಸ್ಪಿಟಲ್ ಮುಂಬಯಿ ಹೌಸ್, ಟಾಟಾ ಬೃಹತ್ ಉದ್ಯೋಗಗಳ ಪ್ರಧಾನ ಕಛೇರಿ. ಇವತ್ತು ಪಾಕಿಸ್ತಾನಲ್ಲಿರುವ ಕರಾಚಿ ನಗರದಲ್ಲಿ ಕರಾಚಿ ಪೋರ್ಟ್ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಛೇರಿಯ ಕಟ್ಟಡವನ್ನೂ ವಿನ್ಯಾಸಗೊಳಿಸಿದರು. == ಉಲ್ಲೇಖಗಳು ==